Wednesday 22 June 2016

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಯೋಗ ಸಹಕಾರಿ 

                                         : ಡಾ| ಸ್ವಪ್ನ ಜಯಗೋವಿ೦ದ್ ಉಕ್ಕಿನಡ್ಕ

                  

       ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಯೋಗ ಸಹಕಾರಿ. ಇದು ಕೇವಲ ದಿನಾಚರಣೆಗಳಿಗೆ ಸೀಮಿತವಾಗದೆ ಜೀವನಕ್ರಮವಾಗಿ ಬದಲಾಗಬೇಕು ಎ೦ದು  ಡಾ| ಸ್ವಪ್ನ ಜಯಗೋವಿ೦ದ್ ಉಕ್ಕಿನಡ್ಕ ಹೇಳಿದ್ದಾರೆ. ಅವರು ಶ್ರೀ ಶ೦ಕರನಾರಾಯಣ ಪ೦ಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ವಿಶ್ವಯೋಗದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತಿದ್ದರು. ನಂತರ ಅವರು ಯೋಗದ ಕುರಿತು ಮಾಹಿತಿ ಹಾಗೂ ಪ್ರದರ್ಶನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷ  ಶ್ರೀ  ಗೋಪಾಲಕೃಷ್ಣ ಸಿ.ಎಚ್, ಶಾಲಾ ಎಂ.ಪಿ.ಟಿ.ಎ  ಅಧ್ಯಕ್ಷ ಶ್ರೀಮತಿ ಬೇಬಿ ಶಾಲಿನಿ, ಎಸ್.ಎಸ್.ಜಿ ಅಧ್ಯಕ್ಷ ಶ್ರೀ ಕುಮಾರನ್ ಇಕ್ಕೆರಿ, ಶಾಲಾ ಹಿತೈಷಿ  ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ. ಶ್ರೀ  ಗೋವಿಂದ ಭಟ್ ಶಿಮಿಲಡ್ಕ  ಮೊದಲಾದವರು ಭಾಗವಹಿಸಿದರು.ಹೆತ್ತವರು,ಊರವರು, ಹಳೆ ವಿದ್ಯಾರ್ಥಿಗಳು ವಿಶ್ವಯೋಗದಿನಾಚರಣೆಯಲ್ಲಿ ಪಾಲ್ಗೊಂಡರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ ಸರಸ್ವತಿ ಸ್ವಾಗತಿಸಿ, ಅಧ್ಯಾಪಕ ಶ್ರೀ ರಾಜೇಶ್ ಯಸ್ ಧನ್ಯವಾದವಿತ್ತರು. ಅಧ್ಯಾಪಿಕೆ ಶ್ರೀಮತಿ ದೇವಕಿ ಪ್ರಾರ್ಥನೆ ಹಾಡಿದರು.

No comments:

Post a Comment