Tuesday 8 September 2015

onam celebration






            Vaishali-- Vamana






             Yashas--- Mahabali

Sunday 16 August 2015


ಉದಯಗಿರಿಯಲ್ಲಿ ಸ್ವಾತಂತ್ರ್ಯೋತ್ಸವ

    ಶ್ರೀ ಶಂಕರನಾರಾಯಣ ಪಂಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿ

ಇಲ್ಲಿ ಸ್ವಾತಂತ್ರ್ಯೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಶಾಲಾ ಪಿ.ಟಿ.ಎ

ಅಧ್ಯಕ್ಷರಾದ  ಶ್ರೀ  ಗೋಪಾಲಕೃಷ್ಣ ಸಿ.ಎಚ್ ಧ್ವಜಾರೋಹಣ ಮಾಡಿದರು.

 ಸ್ವಾತಂತ್ರ್ಯೋತ್ಸವದ ಭಾಗವಾಗಿ ನಡೆದ ಸಭಾಕಾರ್ಯಕ್ರಮವನ್ನು ಬಾಂಜತ್ತಡ್ಕ ಗ್ರಾಮ ವಿಕಾಸ ಸಮಿತಿ 

ಅಧ್ಯಕ್ಷರಾದ ಡಾ.ಜೋಸ್ ಉದ್ಘಾಟಿಸಿದರು. ನಿವೃತ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ  ಪಿ.ಲಕ್ಷ್ಮಿ,

ಶಾಲಾ ಎ೦.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಬೇಬಿ ಶಾಲಿನಿ,

ಎಸ್.ಎಸ್.ಜಿ ಅಧ್ಯಕ್ಷರಾದ  ಶ್ರೀ ಕುಮಾರನ್ ಇಕ್ಕೇರಿ, ಶಾಲಾ ಹಿತೈಷಿ  ಶ್ರೀ ಪುರುಷೋತ್ತಮ ಭಟ್

ಮಿಂಚಿನಡ್ಕ, ಶ್ರೀ  ಗೋವಿಂದ ಭಟ್,  ಶ್ರೀ ರವಿ ಕೈಲಂಕಜೆ, ಅಂಗನವಾಡಿ ಅಧ್ಯಾಪಿಕೆ ಶ್ರೀಮತಿ  ಲೀಲಾ, 

ಗ್ರಾಮ ವಿಕಾಸ ಸಮಿತಿ ಕಾರ್ಯದರ್ಶಿ  ಶ್ರೀ ವಿನೋದ್, ಶಾಲಾ ಹಳೆ ವಿದ್ಯಾರ್ಥಿ ಕೃಷ್ಣಪ್ರಸಾದ್, ಭಗತ್

ಸಿಂಗ್ ಆರ್ಟ್ಸ್ ಏಂಡ್ ಸ್ಪೋಟ್ಸ್ ಕ್ಲಬ್ ನ  ಕಾರ್ಯದರ್ಶಿ ಶ್ರೀ ವಸಂತ ಕುಮಾರ್ ಬಾಂಜತ್ತಡ್ಕ

ಮೊದಲಾದವರು ಶುಭ ಹಾರೈಸಿದರು.
        
ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಂಬಿಕಾ ಸರಸ್ವತಿ ಸ್ವಾಗತಿಸಿ ಕೊನೆಯಲ್ಲಿ 

ಶ್ರೀಮತಿ  ಸವಿತಾ ಸಿ.ಎಚ್ ಧನ್ಯವಾದವಿತ್ತರು. ಅಧ್ಯಾಪಕರಾದ ಶ್ರೀ ರಾಜೇಶ್.ಯಸ್ ಕಾರ್ಯಕ್ರಮ

ನಿರೂಪಿಸಿದರು.










ಉದಯಗಿರಿಯಲ್ಲಿ ಕವಿ ಕಯ್ಯಾರರ ಭಾವಚಿತ್ರ ಅನಾವರಣ


ಉದಯಗಿರಿ: ಇತ್ತೀಚೆಗೆ ನಿಧನರಾದ ಕವಿ ಕಯ್ಯಾರರ ಭಾವಚಿತ್ರ ಅನಾವರಣ ಕಾರ್ಯಕ್ರಮವು  ಶ್ರೀ

ಶಂಕರನಾರಾಯಣ ಪಂಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ

ಜರಗಿತು. ನಿವೃತ ಮುಖ್ಯೋಪಾಧ್ಯಾಯಿನಿ  ಶ್ರೀ ಮತಿ  ಪಿ.ಲಕ್ಷ್ಮಿ,  ಭಾವಚಿತ್ರ ಅನಾವರಣಗೊಳಿಸಿ  ಕವಿ

ಕಯ್ಯಾರ ನಿಧನವು ಕೇವಲ ಸಾಹಿತ್ಯಲೋಕಕ್ಕೆ ಮಾತ್ರವಲ್ಲ, ಅವರ ಸ್ಥಾನ ತುಂಬುವವರಿಲ್ಲ, ಅವರಿಗೆ

ಅವರೇ ಸಾಟಿ ಹಾಗಾಗಿ ಈ ನಾಡಿನಲ್ಲಿ ಅವರು ಇನ್ನೊಮ್ಮೆ ಜನಿಸಿ ಬರಲಿ ಎ೦ದು ಆಶಿಸಿದರು.


ಕಾರ್ಯಕ್ರಮದಲ್ಲಿ  ಶಾಲಾ ಪಿ.ಟಿ.ಎ

ಅಧ್ಯಕ್ಷರಾದ  ಶ್ರೀ  ಗೋಪಾಲಕೃಷ್ಣ ಸಿ.ಎಚ್, ಎ೦.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಬೇಬಿ ಶಾಲಿನಿ,

ಎಸ್.ಎಸ್.ಜಿ ಅಧ್ಯಕ್ಷರಾದ  ಶ್ರೀ ಕುಮಾರನ್ ಇಕ್ಕೇರಿ, ಶಾಲಾ ಹಿತೈಷಿ  ಶ್ರೀ ಪುರುಷೋತ್ತಮ ಭಟ್

ಮಿಂಚಿನಡ್ಕ, ಶ್ರೀ  ಗೋವಿಂದ ಭಟ್,  ಶ್ರೀ ರವಿ ಕೈಲಂಕಜೆ, ಅಂಗನವಾಡಿ ಅಧ್ಯಾಪಿಕೆ ಶ್ರೀಮತಿ  ಲೀಲಾ, 

ಗ್ರಾಮ ವಿಕಾಸ ಸಮಿತಿ ಕಾರ್ಯದರ್ಶಿ  ಶ್ರೀ ವಿನೋದ್, ಶಾಲಾ ಹಳೆ ವಿದ್ಯಾರ್ಥಿ ಕೃಷ್ಣಪ್ರಸಾದ್, ಭಗತ್

ಸಿಂಗ್ ಆರ್ಟ್ಸ್ ಏಂಡ್ ಸ್ಪೋಟ್ಸ್ ಕ್ಲಬ್ ನ  ಕಾರ್ಯದರ್ಶಿ ಶ್ರೀ ವಸಂತ ಕುಮಾರ್ ಬಾಂಜತ್ತಡ್ಕ

ಮೊದಲಾದವರು ಶುಭ ಹಾರೈಸಿದರು.


ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಂಬಿಕಾ ಸರಸ್ವತಿ ಸ್ವಾಗತಿಸಿ ಕೊನೆಯಲ್ಲಿ 

ಶ್ರೀಮತಿ  ಸವಿತಾ ಸಿ.ಎಚ್ ಧನ್ಯವಾದವಿತ್ತರು. ಅಧ್ಯಾಪಕರಾದ ಶ್ರೀ ರಾಜೇಶ್.ಯಸ್ ಕಾರ್ಯಕ್ರಮ

ನಿರೂಪಿಸಿದರು.

Tuesday 11 August 2015

kayyararige 101 namana

                                   ಉದಯಗಿರಿ: ಸಂತಾಪ ಸಭೆ

 

ಬದಿಯಡ್ಕ: ಡಾ.ಕಯ್ಯಾರ ಕಿಣ್ಣ ರೈಯವರಿಗೆ  ಸಂತಾಪ ಸೂಚಕ ಸಭೆಯು ಶ್ರೀ ಶ೦ಕರನಾರಾಯಣ ಪ೦ಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ಸೋಮವಾರ ಬೆಳಗ್ಗೆ ನಡೆಯಿತು.ಶಾಲಾ ಪಿ.ಟಿ.ಎ ಅಧ್ಯಕ್ಷ  ಶ್ರೀ  ಗೋಪಾಲಕೃಷ್ಣ ಸಿ.ಎಚ್, ಶಾಲಾ ಎಂ.ಪಿ.ಟಿ.ಎ  ಅಧ್ಯಕ್ಷ ಶ್ರೀಮತಿ ಬೇಬಿ ಶಾಲಿನಿ, ಶಾಲಾ ಹಿತೈಷಿ  ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ. ಶ್ರೀ  ಗೋವಿಂದ ಭಟ್,  ಶ್ರೀ ರವಿ ಕೈಲಂಕಜೆ , ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಂಬಿಕಾ ಸರಸ್ವತಿ, ಅಂಗನವಾಡಿ ಅಧ್ಯಾಪಿಕೆ ಶ್ರೀ ಮತಿ  ಲೀಲಾ ಮೊದಲಾದವರು ಕಯ್ಯಾರರ ಗುಣಗಾನ ಮಾಡಿದರು.  ಶಾಲೆಗೆ ರಜೆ ಸಾರಲಾಯಿತು. ಒಂದು ವಾರ ಶೋಕಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಯಿತು.ನಂತರ  ಕವಿತಾ ಕುಟೀರಕ್ಕೆ ತೆರಳಿ ಅಂತಿಮದರ್ಶನ ಪಡೆಯಲಾಯಿತು.                                         

Friday 12 June 2015

DR. K K RAI - HAPPY BIRTHDAY TO YOU






ENVIRONMENTAL DAY CELEBRATION






      ನಮ್ಮ ನಡಿಗೆ ಪರಿಸರದೆಡೆಗೆ



       

 

         ಪರಿಸರ ದಿನಾಚರಣೆ






               June 5 






Wednesday 3 June 2015

PRAVESHOTHSAVAM REPORT


ಉದಯಗಿರಿಯಲ್ಲಿ ಪ್ರವೇಶೋತ್ಸವ

    ಶ್ರೀ ಶಂಕರನಾರಾಯಣ ಪಂಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿ ಇಲ್ಲಿನ ಶಾಲಾ ಪ್ರವೇಶೋತ್ಸವವು  ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಶಾಲಾ ಎಸೆಂಬ್ಲಿ, ಮೆರವಣಿಗೆ,ನವಾಗತರಿಗೆ ಸ್ವಾಗತ,ಸಭೆ ಇತ್ಯಾದಿ ಕಾರ್ಯಕ್ರಮಗಳು ಪ್ರವೇಶೋತ್ಸವದ ಭಾಗವಾಗಿ ನಡೆಯಿತು.ಸರ್ವ ಶಿಕ್ಷಾ ಅಭಿಯಾನ್ ನ ವತಿಯಿಂದ ಲಭಿಸಿದ  ಸಮವಸ್ತ್ರ,ಅಧ್ಯಾಪಕ ವೃಂದದವರು ಮಕ್ಕಳಿಗೆ ನೀಡಿದ ಕಲಿಕಾ ಕಿಟ್ ಮತ್ತು ಬಟ್ಟಲುಗಳು,ಶಾಲಾ ಪಿ.ಟಿ.ಎ ಸದಸ್ಯೆ  ಶ್ರೀಮತಿ ಬೇಬಿ ಶಾಲಿನಿ ನೀಡಿದ ಕೊಡೆ, ಶ್ರೀ ಮಾಹಿನ್ ಕೇಳೋಟ್ ಬದಿಯಡ್ಕ,  ಶ್ರೀ ರವಿ ಕೈಲಂಕಜೆ, ,ಶ್ರೀ ಮತಿ  ಪಿ.ಲಕ್ಸಿಯವರು ನೀಡಿದ ಸಿಹಿತಿಂಡಿ ಪ್ರವೇಶೋತ್ಸವವನ್ನು ಆಕರ್ಷಕಗೊಳಿಸಿತು.

    ಪ್ರವೇಶೋತ್ಸವದ ಭಾಗವಾಗಿ ನಡೆದ ಸಭಾಕಾರ್ಯಕ್ರಮವನ್ನು ಶಾಲಾ ಹಿತೈಷಿ  ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ ಉದ್ಘಾಟಿಸಿದರು. ಶ್ರೀ  ಗೋವಿಂದ ಭಟ್,  ಶ್ರೀ ರವಿ ಕೈಲಂಕಜೆ, ಅಂಗನವಾಡಿ ಅಧ್ಯಾಪಿಕೆ ಶ್ರೀ ಮತಿ  ಲೀಲಾ ಮೊದಲಾದವರು ಶುಭ ಹಾರೈಸಿದರು. ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಂಬಿಕಾ ಸರಸ್ವತಿ ಸ್ವಾಗತಿಸಿ ಕೊನೆಯಲ್ಲಿ  ಶ್ರೀಮತಿ  ಬೇಬಿ ಶಾಲಿನಿ ಧನ್ಯವಾದವಿತ್ತರು. ಅಧ್ಯಾಪಕರಾದ ಶ್ರೀ ರಾಜೇಶ್.ಯಸ್ ಕಾರ್ಯಕ್ರಮ ನಿರೂಪಿಸಿದರು.

PRAVESHOTHSAVAM 2015-16

 

 ಪ್ರವೇಶೋತ್ಸವ
2015-16
    
 ಪ್ರವೇಶೋತ್ಸವದ ಭಾಗವಾಗಿ ನಡೆದ ಸಭಾಕಾರ್ಯಕ್ರಮವನ್ನು ಶಾಲಾ ಹಿತೈಷಿ  ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ ಉದ್ಘಾಟಿಸಿದರು