Saturday 4 August 2018

ಉದಯಗಿರಿ ಶಾಲೆಯಲ್ಲಿ ವಿಜ್ಞಾನೋತ್ಸವ

                          ಉದಯಗಿರಿ ಶಾಲೆಯಲ್ಲಿ ವಿಜ್ಞಾನೋತ್ಸವ
ಬದಿಯಡ್ಕ: ಶ್ರೀ ಶ೦ಕರನಾರಾಯಣ ಪ೦ಚಾಯತು ಅನುದಾನಿತ  ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ವಿಜ್ಞಾನದ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಶನಿವಾರ  ವಿಜ್ಞಾನೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
    ಹಿರಿಯ ಯಕ್ಷಗಾನ ಕಲಾವಿದರೂ ವಿಶ್ವ ಜಾನಪದ ಪ್ರಶಸ್ತಿ ಪುರಸ್ಕೃತರೂ ಆದ ಶ್ರೀ ಜಯರಾಮ ಪಾಟಾಳಿ ಪಡುಮಲೆ  ವಿಜ್ಞಾನೋತ್ಸವವನ್ನು ಸರಳ ಪ್ರಯೋಗ ಮಾಡುವುದರ ಮೂಲಕ ಉದ್ಘಾಟಿಸಿದರು. ಪಂಚೇಂದ್ರಿಯಗಳ ಮೂಲಕ ಕಲಿಯುವ ವಿಶೇಷ ಜ್ಞಾನವೇ ವಿಜ್ಞಾನ. ಹಾಗಾಗಿ ನೋಡಿ ಕೇಳಿ ಕಲಿಯುವುದಕ್ಕಿಂತ ಮಾಡಿ ಕಲಿಯುವಾಗ ಆಗುವ ಆಶಯಗ್ರಹಣವು ಶಾಶ್ವತವಾಗಿ ನೆನಪಿನಲ್ಲಿರುವುದು. ಸರಕಾರಿ ಶಾಲೆಗಳಿಂದು ಜ್ಞಾನ ವಿಜ್ಞಾನ ಕೇಂದ್ರಗಳಾಗಿ ಬದಲಾಗುತ್ತಿವೆ. ಶಿಕ್ಷಣದ ಗುಣಮಟ್ಟವಿಂದು ಮೇಲ್ಮುಖವಾಗಿ ಸಾಗುತ್ತಿದೆ. ಅಧ್ಯಾಪಕರ ಸೇವಾಮನೋಭಾವ ಕೂಡ ಪ್ರಶಂಸನೀಯ. ಹಲವು ಶೈಕ್ಷಣಿಕ ಸಾಂಸ್ಕೃತಿಕವಾದ ವಿಶಿಷ್ಟ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಉದಯಗಿರಿ ಶಾಲೆಯು ಇತರ ಶಾಲೆಗಳಿಗೆ ಮಾದರಿಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
    ಕಾಂತೀಯ ಬಲ, ವಾಯುವಿನ ಬಲ,ಭಾರ,ನೀರಿನ ವಿವಿಧ ಗುಣಗಳು, ವಿದ್ಯುತ್ ಉಷ್ಣ ಪರಿಚಾಲಕಗಳು, ರಸಪ್ರಶ್ನೆ, ಸರಳ ಪ್ರಯೋಗಗಳ ವೀಡಿಯೋ, ಮ್ಯಾಜಿಕ್ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಇದರ ಭಾಗವಾಗಿ ನಡೆಸಲಾಯಿತು.
     ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಕುಸುಮ,ಎಂ.ಪಿ.ಟಿ.ಎ ಅಧ್ಯಕ್ಷೆ  ಶ್ರೀಮತಿ ಬೇಬಿ ಶಾಲಿನಿ ಅಲ್ಲದೆ ಹೆತ್ತವರು,ಊರವರು ಭಾಗವಹಿಸಿದರು.ಅಧ್ಯಾಪಕರಾದ ಶ್ರೀ ರಾಜೇಶ್ ಯಸ್, ಶ್ರೀಮತಿ ಪ್ರಿಯ.ಕೆ, ಫಾತಿಮತ್ ಶಾಹಿನ  ಕಾರ್ಯಕ್ರಮದ ನೇತೃತ್ವ ವಹಿಸಿದರು.

HELLO ENGLISH






ಉದಯಗಿರಿ ಶಾಲಾ ಬಯಲು ಪ್ರವಾಸ












      ಉದಯಗಿರಿ ಶಾಲಾ ಬಯಲು ಪ್ರವಾಸ

ಬದಿಯಡ್ಕ:ಕಲಿಕೆ ಎಂಬುದು ನಾಲ್ಕು ಗೋಡೆಯೊಳಗೆ ನಡೆಯುವ ಪ್ರಕ್ರಿಯೆಯಲ್ಲ. ಪ್ರತ್ಯಕ್ಷ, ಪಂಚೇಂದ್ರಿಯಗಳ ಮೂಲಕ ಕಲಿಕೆ ನಡೆದಾಗ ಆಶಯಗಳು ಗಟ್ಟಿಗೊಳ್ಳುತ್ತವೆ ಎಂಬುದು ಬಯಲು ಪ್ರವಾಸಗಳ ಮೂಲಕ ತಿಳಿಯುವ ಸತ್ಯವಾಗಿದೆ. ಭತ್ತದ ಕೃಷಿಯ ಕಷ್ಟ ನಷ್ಟಗಳನ್ನು ತಿಳಿದಾಗ ಮಾತ್ರ ಒಂದು ಕಾಳು ಅನ್ನದ ಬೆಲೆ ತಿಳಿಯುವುದೆಂದು ನಿವೃತ್ತ ಗುಮಾಸ್ತರೂ ಕೃಷಿಕರೂ ಆದ ಶ್ರೀ ಕೇಶವ ಪ್ರಭು ಕರಿಂಬಿಲ ಹೇಳಿದರು. ಅವರು ಶ್ರೀ ಶ೦ಕರನಾರಾಯಣ ಪ೦ಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯ  ಮಕ್ಕಳಿಗೆ ಭತ್ತದ ಬಯಲನ್ನು ಪರಿಚಯಿಸಿ,ಕೃಷಿಯ ಬಗ್ಗೆ ವಿವರಣೆ ನೀಡಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.ಪಂಚಾಯತು ಸದಸ್ಯರಾದ ಶ್ರೀ ವಿಶ್ವನಾಥ ಪ್ರಭು, ಸ್ಥಳೀಯರಾದ ಶ್ರೀ ದಿನೇಶ್ ಪ್ರಭು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ ಸರಸ್ವತಿ,  ಅಧ್ಯಾಪಕರಾದ ಶ್ರೀ ರಾಜೇಶ್ ಯಸ್, ಎಂ.ಪಿ.ಟಿ.ಎ  ಅಧ್ಯಕ್ಷೆ  ಶ್ರೀಮತಿ ಬೇಬಿ ಶಾಲಿನಿ, ಎಸ್.ಎಸ್.ಜಿ ಸದಸ್ಯರಾದ ಶ್ರೀಮತಿ ರಶ್ಮಿ ಎ.ಎಸ್ ಮೊದಲಾದವರು ಬಯಲು ಪ್ರವಾಸಕ್ಕೆ ಸಹಕರಿಸಿದರು.