Wednesday 16 July 2014

cp


ಕಾಸರಗೋಡು
ಎಷ್ಟು ಸುಂದರ ನಾಡಿದು
ನಮ್ಮ ಕಾಸರಗೋಡಿದು
                       ಕಂಗು ತೆಂಗಿನ ನಾಡಿದು
                      ಯಕ್ಷಗಾನದ ಬೀಡಿದು

   ಭತ್ತ ಬೆಳೆಯುವ ಊರಿದು
   ಪ್ರೀತಿ ಪ್ರೇಮದ ಕೇರಿದು
                            ಹಿಂದು ಮುಸ್ಲೀಂ ಕ್ರೈಸ್ತರು
                             ಬಾಳಿ ಬದುಕುವ ಗೂಡಿದು
ಸಪ್ತಭಾಷಾ ಸಂಗಮ
ಅದುವೆ ನಮ್ಮ ಸಂಭ್ರಮ

ಶರಣ್ಯ. ಬಿ    4 ನೇತರಗತಿ


ಗಂಜಿ ಅಮ್ಮ

 ಬೆಳಗಿನ ಜಾವದಿ ಬೇಗನೆ ಎದ್ದು
 ಒಲೆಯನು ಅವರು ಉರಿಸುವರುI
ನೀರನು ಕುದಿಸಿ ಹಾಲನು ಕಾಯಿಸಿ
 ಮಕ್ಕಳಿಗೆಲ್ಲ ಹಂಚುವರುII

      ಬಿಸಿ ಬಿಸಿ ಅಡುಗೆ ಗಮಗಮ ಸಾರು
      ವಿಧವಿಧ ರುಚಿಯ ವೈಭವವುI
      ತರತರ ಕಾಯಿ ಬಗೆಬಗೆ ಪಲ್ಯ
      ಶುಚಿರುಚಿಯಾದ ಔತಣವುII

                               ಬಟ್ಟಲು ಇಟ್ಟರೆ ತಟ್ಟೆಯತುಂಬ
                               ಉಣ ಬಡಿಸುವರು ಕಮಲಮ್ಮI
                               ಕೆಸರಲಿ ಅರಳುವ ಕಮಲದ ತೆರದಲಿ
                              ವಾತ್ಸಲ್ಯ ನೀಡುವ ನಮ್ಮಮ್ಮII

ಶರಣ್ಯ .ಬಿ.ಎಸ್    4ನೇ ತರಗತಿ