Wednesday 4 March 2015

SCHOOL REPORT


ಮಕ್ಕಳ ಪ್ರತಿಭೆಗಳನ್ನು ಹೊರಸೂಸಲು ಶಾಲಾ ವಾರ್ಷಿಕೋತ್ಸವಗಳು ಸಹಕಾರಿಯಾಗಿವೆ.
                                                                                     
                                                                                                              -ಶ್ರೀಮತಿ ಸುಧಾ ಜಯರಾಂ
ಪ್ರತಿಭೆಗಳಿಲ್ಲದ ಮಕ್ಕಳಿಲ್ಲ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ, ಬೆಳೆಸಿ ವೇದಿಕೆಗಳನ್ನು ರೂಪಿಸಿಕೊಡುವುದು ಶಾಲೆಗಳ ಕರ್ತವ್ಯವಾಗಿದೆ. ಅಂತಹ ಕೆಲಸಗಳು ಇಂದು ಸರಕಾರಿ,ಅನುದಾನಿತ  ಶಾಲೆಗಳಲ್ಲಿ ಹೆಚ್ಚೆಚ್ಚು ನಡೆಯುತ್ತಿರುವುದು  ಸಂತೋಷದ ವಿಚಾರವಾಗಿದೆ. ಶಾಲಾ  ಹಿರಿಮೋತ್ಸವ,ವಾರ್ಷಿಕೋತ್ಸವಗಳು ಮಕ್ಕಳ ಪ್ರತಿಭೆಗಳನ್ನು ಸಮಾಜದ ಮುಂದಿಡಲಿರುವ ಸೂಕ್ತ ವೇದಿಕೆಯಾಗಿದೆ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ  ಶ್ರೀಮತಿ ಸುಧಾ ಜಯರಾಂ ಅಭಿಪ್ರಾಯಪಟ್ಟರು. ಅವರು ಉದಯಗಿರಿ ಶ್ರೀ ಶಂಕರನಾರಾಯಣ ಪಂಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಹಿರಿಮೋತ್ಸವ,ವಾರ್ಷಿಕೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ  ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ  ಶ್ರೀಮತಿ  ಶಾರದರವರು ಅಧ್ಯಕ್ಷತೆವಹಿಸಿದ್ದರು.
                     ಕಾರ್ಯಕ್ರಮಕ್ಕೆ ಎಸ್ ಎಸ್ ಎ ಪ್ರೋಗ್ರಾಂ ಓಫೀಸರ್ ಶ್ರೀ ಯತೀಶ್ ಕುಮಾರ್ ರೈ, ಕುಂಬಳೆ ಬಿ.ಪಿ.ಒ ಶ್ರೀ ರಾಧಾಕೃಷ್ಣ, ಪಿ.ಇ.ಸಿ ಸೆಕ್ರಟರಿ ಶ್ರೀ ಗೋಪಾಲಕೃಷ್ಣ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ವಿ ಶೆಟ್ಟಿ  ಮೊದಲಾದವರು ಶುಭ ಹಾರೈಸಿದರು.
ಈ ವರ್ಷ ನಿವೃತ್ತ ರಾಗಲಿರುವ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ  ಪಿ.ಲಕ್ಷ್ಮಿ,
ನವಜೀವನ ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಜಗನ್ನಾಥ ಆಳ್ವ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕುಞಣ್ಣ ನಾಯಕ್, ಶ್ರೀ  ಅಚ್ಚುತ ಮಣಿಯಾಣಿ, ಅಂಗನವಾಡಿ ಅಧ್ಯಾಪಿಕೆ ಶ್ರೀ ಮತಿ  ಲೀಲಾ, ಶಾಲಾ ಹಿತೈಷಿಗಳಾದ  ಶ್ರೀ  ಸೀತಾರಾಮ,  ಶ್ರೀ ರಾಮ ಮಾಸ್ಟರ್, ಶ್ರೀ  ಗೋಪಾಲಕೃಷ್ಣ ಸಿ.ಎಚ್, ಶ್ರೀ ಕುಮಾರ ಇ,  ಶ್ರೀಮತಿ  ವಿಜಯಕುಮಾರಿ,
 ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ, ಶ್ರೀ  ಗೋವಿಂದ ಭಟ್, ಶ್ರೀ ರವಿ ಕೈಲಂಕಜೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಾಲಾ ಅಧ್ಯಾಪಿಕೆ ಶ್ರೀ ಮತಿ ಸವಿತ.ಸಿ.ಎಚ್ ಸ್ವಾಗತಿಸಿ ಕೊನೆಯಲ್ಲಿ ಅಧ್ಯಾಪಿಕೆ ಶ್ರೀ ಮತಿ ಗೀತಮಾಲಿನಿ ಸಿ.ಎಚ್ ಧನ್ಯವಾದವಿತ್ತರು. ಅಧ್ಯಾಪಕರಾದ ಶ್ರೀ ರಾಜೇಶ್.ಯಸ್ ಕಾರ್ಯಕ್ರಮ ನಿರೂಪಿಸಿದರು.





 ಶಾಲೆಗಳಲ್ಲಿ ನಡೆಯುತ್ತಿರುವ ಉತ್ತಮ ಚಟುವಟಿಕೆಗಳು ಹೊರಜಗತ್ತು ತಿಳಿಯಬೇಕು
                                                                                           
                                                                                                                             ಶ್ರೀ  ಕೈಲಾಸಮೂರ್ತಿ

ರಕಾರಿ, ಅನುದಾನಿತ ಶಾಲೆಗಳಲ್ಲಿ  ಇಂದು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಲಭಿಸುತ್ತದೆ. ಆದರೆ ಸಮಾಜಕ್ಕೆ ಅದನ್ನು ತಿಳಿಸುವ ವ್ಯವಸ್ಥಿತ ಕಾರ್ಯ ಇಲ್ಲಿತನಕ ನಡೆಯಲಿಲ್ಲ.  ಹಿರಿಮೋತ್ಸವದ ಮೂಲಕ ಮಕ್ಕಳ ಪ್ರತಿಭೆ, ಸಾಮರ್ಥ್ಯಗಳು ಹೊರಜಗತ್ತು ತಿಳಿಯಬೇಕು ಎಂದು ಕುಂಬಳೆ ಉಪಜಿಲ್ಲಾ ವಿಧ್ಯಾಧಿಕಾರಿ ಶ್ರೀ ಕೈಲಾಸಮೂರ್ತಿ ಅಭಿಪ್ರಾಯಪಟ್ಟರು.ಅವರು ಉದಯಗಿರಿ ಶ್ರೀ ಶಂಕರನಾರಾಯಣ ಪಂಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಹಿರಿಮೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮಕ್ಕೆ ಕುಂಬಳೆ ಬಿ.ಪಿ.ಒ ಶ್ರೀ ರಾಧಾಕೃಷ್ಣ, ಪಿ.ಇ.ಸಿ ಸೆಕ್ರಟರಿ ಶ್ರೀ ಗೋಪಾಲಕೃಷ್ಣ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ವಿ ಶೆಟ್ಟಿ  ಮೊದಲಾದವರು ಶುಭ ಹಾರೈಸಿದರು. ಈ ವರ್ಷ ನಿವೃತ್ತ ರಾಗಲಿರುವ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ  ಪಿ.ಲಕ್ಷ್ಮಿ,ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕುಞಣ್ಣ ನಾಯಕ್, ಶ್ರೀ  ಅಚ್ಚುತ ಮಣಿಯಾಣಿ, ಅಂಗನವಾಡಿ ಅಧ್ಯಾಪಿಕೆ ಶ್ರೀ ಮತಿ  ಲೀಲಾ, ಶಾಲಾ ಹಿತೈಷಿಗಳಾದ  ಶ್ರೀ  ಸೀತಾರಾಮ,  ಶ್ರೀ ರಾಮ ಮಾಸ್ಟರ್, ಶ್ರೀ  ಗೋಪಾಲಕೃಷ್ಣ ಸಿ.ಎಚ್, ಶ್ರೀ ಕುಮಾರ ಇ,  ಶ್ರೀಮತಿ  ವಿಜಯಕುಮಾರಿ,
 ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ, ಶ್ರೀ  ಗೋವಿಂದ ಭಟ್, ಶ್ರೀ ರವಿ ಕೈಲಂಕಜೆ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ನಿವೃತ್ತ ಜೀವನವು ಸಂಸ್ಥೆಯ ಏಳಿಗೆಗಾಗಿಯೇ ಮರುಬಳಕೆಯಾಗಬೇಕು.

                                                                                                            ಶ್ರೀ ಯತೀಶ್ ಕುಮಾರ್ ರೈ

ಚಿಗುರೆಲೆಗಳಿಗೆ ಅವಕಾಶ ನೀಡುವ ಹಣ್ಮೆಲೆಗಳು ಮರದಿಂದ ಬಿದ್ದು ಮರಕ್ಕೆ ಗೊಬ್ಬರವಾಗುವಂತೆ ನಿವೃತ್ತ ಅಧ್ಯಾಪಕರು ಮುಂದಿನ ಜೀವನವನ್ನು ತಾವು ಸೇವೆಸಲ್ಲಿಸಿದ ವಿದ್ಯಾಸಂಸ್ಥೆಗಳಿಗೆ ಮೀಸಲಿರಿಸಬೇಕೆಂದು ಕಾಸರಗೋಡು ಜಿಲ್ಲಾ ಸರ್ವ ಶಿಕ್ಷಾ ಅಭಿಯಾನ್ ನ ಸಂಯೋಜನಾಧಿಕಾರಿ   ಶ್ರೀ ಯತೀಶ್ ಕುಮಾರ್ ರೈ ಅಭಿಪ್ರಾಯಪಟ್ಟರು.
ಅವರು ಉದಯಗಿರಿ ಶ್ರೀ ಶಂಕರನಾರಾಯಣ ಪಂಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಿಂದ ಈ ವರ್ಷ ನಿವೃತ್ತ ರಾಗಲಿರುವ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ  ಪಿ.ಲಕ್ಷ್ಮಿರವರ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮಕ್ಕೆ ಕುಂಬಳೆ ಬಿ.ಪಿ.ಒ ಶ್ರೀ ರಾಧಾಕೃಷ್ಣ, ನವಜೀವನ ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಜಗನ್ನಾಥ ಆಳ್ವ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕುಞಣ್ಣ ನಾಯಕ್, ಶ್ರೀ  ಅಚ್ಚುತ ಮಣಿಯಾಣಿ, ಅಂಗನವಾಡಿ ಅಧ್ಯಾಪಿಕೆ ಶ್ರೀ ಮತಿ  ಲೀಲಾ, ಶಾಲಾ ಹಿತೈಷಿಗಳಾದ  ಶ್ರೀ  ಸೀತಾರಾಮ,  ಶ್ರೀ ರಾಮ ಮಾಸ್ಟರ್, ಶ್ರೀ  ಗೋಪಾಲಕೃಷ್ಣ ಸಿ.ಎಚ್, ಶ್ರೀ ಕುಮಾರ ಇ,  ಶ್ರೀಮತಿ  ವಿಜಯಕುಮಾರಿ,
 ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ, ಶ್ರೀ  ಗೋವಿಂದ ಭಟ್, ಶ್ರೀ ರವಿ ಕೈಲಂಕಜೆ ಮೊದಲಾದವರು ಶುಭ ಹಾರೈಸಿದರು.

No comments:

Post a Comment