Sunday 3 June 2018

PRAVESHOTHSAVA 2018


 ಉದಯಗಿರಿ ಶಾಲಾ ಪ್ರಾರಂಭೋತ್ಸವ
         ಶ್ರೀ ಶ೦ಕರನಾರಾಯಣ ಪ೦ಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ 

ಉದಯಗಿರಿಯ ಪ್ರವೇಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಪ್ರವೇಶೋತ್ಸವದ 

ಭಾಗವಾಗಿ ನಡೆದ ಸಮಾರಂಭವನ್ನು ಶಾಲಾ ಪಿ.ಟಿ.ಅಧ್ಯಕ್ಷಯಾದ ಶ್ರೀಮತಿ ಕುಸುಮ 

ಬಾಂಜತ್ತಡ್ಕರವರ ಅಧ್ಯಕ್ಷತೆಯಲ್ಲಿ ಶ್ರೀ ಗಣಪತಿ ಭಟ್ ಕೈಲಂಕಜೆ ಉದ್ಘಾಟಿಸಿದರು. ಮುಖ್ಯ 

ಅತಿಥಿಯಾಗಿ ಕೇರಳ ಗ್ರಾಮೀಣ ಬೇಂಕ್ ಬದಿಯಡ್ಕ ಶಾಖಾ ವ್ಯವಸ್ಥಾಪಕರಾದ ಶ್ರೀ ಎಸ್.  

ನಾರಾಯಣ ಭಟ್ ಭಾಗವಹಿಸಿದರು. ಎಂ.ಪಿ.ಟಿ.ಅಧ್ಯಕ್ಷಶ್ರೀಮತಿ ಬೇಬಿ ಶಾಲಿನಿ, ಎಸ್.ಎಸ್.ಜಿ 

ಅಧ್ಯಕ್ಷರಾದ ಶ್ರೀ ಕೃಷ್ಣ ಪ್ರಸಾದ ಭಾರತಬೈಲ್, ಭಗತ್ ಸಿಂಗ್ ಆರ್ಟ್ಸ್ ಏಂಡ್ ಸ್ಪೋರ್ಟ್ಸ್ ಕ್ಲಬ್ 

ಅಧ್ಯಕ್ಷರಾದ ಶ್ರೀ ಕೃಷ್ಣ ಕುಮಾರ್ ಬಾಂಜತ್ತಡ್ಕ, ಕೊಲ್ಲಂಪಾರೆ ಜನಪ್ರಿಯ ಸ್ವ ಸಹಾಯ ಸಂಘದ 

ಕಾರ್ಯದರ್ಶಿ ಶ್ರೀ ಉದಯ ಕುಮಾರ್,
   ಶಾಲಾ ಹಿತೈಷಿಗಳಾದ ಶ್ರೀ ರಾಮ ಮಾಸ್ಟರ್ ಇಕ್ಕೇರಿ, ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ,  

ಶ್ರೀ ಗೋವಿಂದ ಭಟ್ ಶಿಮಿಲಡ್ಕ, ಶ್ರೀ ಕುಮಾರನ್ ಇಕ್ಕೇರಿ, ನಿವೃತ್ತ ಮುಖ್ಯೋಪಾಧ್ಯಾಯಿನಿ 

ಶ್ರೀಮತಿ ಲಕ್ಷ್ಮಿ ಮೊದಲಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
 
 ಈ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೆ ಉಚಿತವಾಗಿ ಪಾಠ ಪುಸ್ತಕ,ನೋಟ್ ಪುಸ್ತಕ,ಪೋರ್ಟ್ 

ಪೋಲಿಯೋ,ಕಲಿಕೋಪಕರಣಗಳು,ಕೊಡೆ,ಬೈಂಡ್ ಪೇಪರ್, ಯೂನಿಫಾರಂ, ಮತ್ತು 

ಸಿಹಿತಿಂಡಿಗಳನ್ನು ವಿತರಿಸಲಾಯಿತು.
 
 ಕಾರ್ಯಕ್ರಮಕ್ಕೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ ಸರಸ್ವತಿ ಸ್ವಾಗತಿಸಿ ಕೊನೆಯಲ್ಲಿ 

ಶ್ರೀಮತಿ ರಶ್ಮಿ ಎ.ಎಸ್ ಧನ್ಯವಾದವಿತ್ತರು. ಅಧ್ಯಾಪಕರಾದ ಶ್ರೀ ರಾಜೇಶ್. ಯಸ್ ಕಾರ್ಯಕ್ರಮ 

ನಿರೂಪಿಸಿದರು.
ಹೆತ್ತವರು,ಊರವರು, ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

No comments:

Post a Comment