Saturday 16 February 2019




ಉದಯಗಿರಿಶಾಲೆಯಲ್ಲಿಕಲಿಕೋತ್ಸವ
 
ಶ್ರೀ ಶ೦ಕರನಾರಾಯಣ ಪ೦ಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ಕಲಿಕೋತ್ಸವನ್ನು  

ಆಚರಿಸಲಾಯಿತು. ಬೆಳಗ್ಗೆ ಕಲಿಕೋತ್ಸವ 2019ನ್ನು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ 

ಕೈಲಾಸಮೂರ್ತಿಯವರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷರಾದ ಶ್ರೀ ಕೆ.ಎನ್ ಕೃಷ್ಣ 

ಭಟ್ ಉದ್ಘಾಟಿಸಿದರು. ಶಾಲೆಗಳ ಭೌತಿಕ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ಜನಪ್ರತಿನಿಧಿಗಳ 

ಕರ್ತವ್ಯವಾದರೆ ಮಕ್ಕಳ ಕಲಿಕಾ ಗುಣಮಟ್ಟವನ್ನು ಉತ್ತಮ ಪಡಿಸುವುದು ಅಧ್ಯಾಪಕರ ಮತ್ತು ಹೆತ್ತವರ 

ಕರ್ತವ್ಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ. 

ಅಧ್ಯಕ್ಷಯಾದ ಶ್ರೀಮತಿ ಕುಸುಮ ಬಾಂಜತ್ತಡ್ಕ,ಶಾಲಾ ಎಂ.ಪಿ.ಟಿ.ಎ ಅಧ್ಯಕ್ಷ ಶ್ರೀಮತಿ ಬೇಬಿ ಶಾಲಿನಿ,  

ಶಾಲಾ ಹಿತೈಷಿಗಳಾದ ಶ್ರೀ ರಾಮ ಮಾಸ್ಟರ್ ಇಕ್ಕೇರಿ, ಶ್ರೀ ರವಿಕಾಂತ ಕೇಸರಿ ಕಡಾರ್, ಶ್ರೀ  

ಪುರುಷೋತ್ತಮ ಭಟ್ ಮಿಂಚಿನಡ್ಕ, ಶ್ರೀಮತಿ ರಶ್ಮಿ ಎ.ಎಸ್ ಬಾಂಜತ್ತಡ್ಕ, ಶ್ರೀಮತಿ ಗೀತಮಾಲಿನಿ  

ಬಾಂಜತ್ತಡ್ಕ ಮೊದಲಾದವರು ಭಾಗವಹಿಸಿದರು. ಹೆತ್ತವರು, ಊರವರು, ಹಳೆ ವಿದ್ಯಾರ್ಥಿಗಳು  

ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ 

ಸರಸ್ವತಿ ಸ್ವಾಗತಿಸಿ ಕೊನೆಯಲ್ಲಿ ಎಸ್.ಎಸ್.ಜಿ ಅಧ್ಯಕ್ಷರಾದ ಶ್ರೀ ಕೃಷ್ಣ ಪ್ರಸಾದ ಭಾರತಬೈಲ್  

ಧನ್ಯವಾದವಿತ್ತರು. ಅಧ್ಯಾಪಕರಾದ ಶ್ರೀ ರಾಜೇಶ್. ಯಸ್ ಕಾರ್ಯಕ್ರಮ ನಿರೂಪಿಸಿದರು.
 
ನಂತರ ಕಲಿಕೋತ್ಸವದ ಭಾಗವಾಗಿ ಸಾಹಿತಿ ವಿರಾಜ್ ಅಡೂರ್ ಅವರೊಂದಿಗೆ ಮಕ್ಕಳು ಸಂದರ್ಶನ ನಡೆಸಿ 

ವರದಿ ತಯಾರಿಸಿದರು. ಕಥೆ, ಕವನ, ಗಾದೆ, ಒಗಟು, ನಾಟಕ,ವಿವರಣೆ, ಗಣಿತಕ್ರಿಯೆ, ಪ್ರಯೋಗ, ಭೂಪಟ 

ಓದು, ಮೊದಲಾದ ಚಟುವಟಿಕೆಗಳನ್ನು ಪ್ರದರ್ಶಿಸಿ ಹೆತ್ತವರ ಮತ್ತು ಊರವರ ಪ್ರಶಂಸೆಗೆ ಪಾತ್ರರಾದರು.  

ಅಧ್ಯಾಪಿಕೆಯರಾದ ಶ್ರೀಮತಿ ವಿಭಶ್ರೀ ಹಾಗೂ ಶ್ರೀಮತಿ ಪ್ರಿಯ ಚಟುವಟಿಕೆಗಳಿಗೆ ನೇತೃತ್ವ ವಹಿಸಿದರು.

No comments:

Post a Comment