Tuesday 15 July 2014

PTA


ರಕ್ಷಕ ಶಿಕ್ಷಕ ಮಹಾಸಭೆ

ಶ್ರೀ ಶಂಕರನಾರಾಯಣ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷರಾದ ಶ್ರೀ ಸಂಜೀವರವರ ಅಧ್ಯಕ್ಷತೆಯಲ್ಲಿ ಪಂಚಾಯತು ಸದಸ್ಯೆ  ಶ್ರೀಮತಿ ಶಾರದ ಸಭೆಯನ್ನು ಉದ್ಘಾಟಿಸಿದರು.ಎಸ್.ಎಸ್.ಜಿ  ಅಧ್ಯಕ್ಷರಾದ ಶ್ರೀ ಕುಮಾರನ್ ಇಕ್ಕೇರಿ ಶುಭ ಹಾರೈಸಿದರು.ಊರಿನ ಗಣ್ಯರಾದ ಶ್ರೀ ಪುರುಷೋತ್ತಮ ಭಟ್, ಶ್ರೀ ಗೋವಿಂದ ಭಟ್, ಶ್ರೀ ರವಿ ಕೈಲಂಕಜೆ, ಶ್ರೀಮತಿ  ವಿಜಯಕುಮಾರಿ ಮೊದಲಾದವರು ಉಪಸ್ಥಿತರಿದ್ದರು. ಹೆತ್ತವರು, ಅಧ್ಯಾಪಕರು,ಮಕ್ಕಳು ಸಭೆಯಲ್ಲಿ ಭಾಗವಹಿಸಿದರು. ಪ್ರಾರಂಭದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಕ್ಷ್ಮಿ ಸ್ವಾಗತಿಸಿ ಕೊನೆಯಲ್ಲಿ ಅಧ್ಯಾಪಕರಾದ ಶ್ರೀ ರಾಜೇಶ್ ಎಸ್ ಧನ್ಯವಾದವಿತ್ತರು.

ಪದಾಧಿಕಾರಿಗಳ ಆಯ್ಕೆ
ಶ್ರೀ ಶಂಕರನಾರಾಯಣ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯ ನೂತನ ಶೈಕ್ಷಣಿಕ ವರ್ಷದ  ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳನ್ನು ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು..ಶ್ರೀ ಗೋಪಾಲಕೃಷ್ಣ (ಅಧ್ಯಕ್ಷರು),ಶ್ರೀ ಅಬ್ದುಲ್ಲ(ಉಪಾಧ್ಯಕ್ಷರು) ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಶ್ರೀಮತಿ ಝೌರ,ಶ್ರೀಮತಿ ಗೋಪಿ,ಶ್ರೀಮತಿ ರುಕಿಯ,ಶ್ರೀ ಸಂಜೀವ, ಶ್ರೀಮತಿ ನಿರ್ಮಲ,ಶ್ರೀ ಉದಯಕುಮಾರ್ ಹಾಗೂ  ಶ್ರೀಮತಿ ಸುಶೀಲರನ್ನು ಆಯ್ಕೆ ಮಾಡಲಾಯಿತು.
ಮಾತೃ ಸಂಘದ ಪದಾಧಿಕಾರಿಗಳಾಗಿ , ಶ್ರೀಮತಿ  ವಿಜಯಕುಮಾರಿ(ಅಧ್ಯಕ್ಷೆ),ಶ್ರೀಮತಿ ಗೋಪಿ(ಉಪಾಧ್ಯಕ್ಷೆ),ಹಾಗೂ  ಶ್ರೀಮತಿ ಕುಸುಮ, ಶ್ರೀಮತಿ  ಝೌರ,ಶ್ರೀಮತಿ  ವಿಜಯಲಕ್ಷ್ಮಿ,ಶ್ರೀಮತಿ ಹರಿಣಾಕ್ಷಿ, ,ಶ್ರೀಮತಿ ಕುಸುಮ,ಶ್ರೀಮತಿ   ಸತ್ಯವತಿರನ್ನು  ಕಾರ್ಯಕಾರಿಣಿಗೆ ಆಯ್ಕೆ ಮಾಡಲಾಯಿತು.
2014-15 ನೇ ವರ್ಷದ ಎಸ್.ಎಸ್.ಜಿ ಯ ಪದಾಧಿಕಾರಿಗಳಾಗಿ .ಶ್ರೀ ಕುಮಾರನ್ ಇಕ್ಕೇರಿ(ಅಧ್ಯಕ್ಷರು), ಶ್ರೀ ಗೋವಿಂದ ಭಟ್(ಉಪಾಧ್ಯಕ್ಷರು) ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಶ್ರೀಪುರುಷೋತ್ತಮ ಭಟ್,ಶ್ರೀಮತಿ ಸವಿತ,ಶ್ರೀ ರವಿ ಕೈಲಂಕಜೆ,ಶ್ರೀ ರವೀಶ ಬಾಂಜತ್ತಡ್ಕ, ಶ್ರೀಮತಿ ಗೀತಮಾಲಿನಿ, ಶ್ರೀ ಬಿಜು, ಶ್ರೀಮತಿ ಬೇಬಿ ಶಾಲಿನಿಯವರನ್ನು  ಆಯ್ಕೆ ಮಾಡಲಾಯಿತು.

ಕ್ಲಬ್  ಉದ್ಘಾಟನೆ
ಶ್ರೀ ಶಂಕರನಾರಾಯಣ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ಇತ್ತೀಚೆಗೆ ಶ್ರೀಮತಿ ಶೈನಿ ಟೀಚರ್ ಮಡಿಕೇರಿ ನೆರವೇರಿಸಿದರು. ಶಿಕ್ಷಣವೆಂದರೆ ಅಕ್ಷರಾಭ್ಯಾಸವಲ್ಲ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕ್ಲಬ್ ಗಳಂತಹ ವೇದಿಕೆಗಳು ಶಾಲೆಯಲ್ಲಿ ಸಕ್ರಿಯವಾಗಬೇಕು ಎ೦ದು ಅವರು ಅಭಿಪ್ರಾಯಪಟ್ಟರು.ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಕ್ಷ್ಮಿ ಯವರು ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಮಕ್ಕಳಿಂದ  ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು. ಗಣಿತ ಕ್ಲಬ್ ನ ಕುಮಾರಿ ಮುನೀರ ಸ್ವಾಗತಿಸಿ ಕೊನೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕುಮಾರಿ ಅನುಶ್ರೀ ಧನ್ಯವಾದವಿತ್ತಳು.

No comments:

Post a Comment