Sunday 22 October 2017

ಬಲಿಯೇಂದ್ರ...ದೀಪಾವಳಿ ಆಚರಣೆ

   ಉದಯಗಿರಿಯಲ್ಲಿ ಸಂಭ್ರಮದ ಬಲಿಯೇಂದ್ರ ಹಬ್ಬ ಆಚರಣೆ

ಬೆಟ್ಟದ ಮೇಲೊಂದು ಶಾಲೆಯನ್ನು ಕಟ್ಟಿ ಸುತ್ತಮುತ್ತಲಿನ ಸಮಾಜದ ಅಜ್ಞಾನವನ್ನು ಜ್ಞಾನದ ಮೂಲಕ ದೂರೀಕರಿಸಿದ ಶಾಲೆಯಲ್ಲಿ ದೀಪಾವಳಿ-ಬಲೀಂದ್ರ ಹಬ್ಬವನ್ನು ಆಚರಿಸುವುದು ಹೆಚ್ಚು ಔಚಿತ್ಯಪೂರ್ಣವೆಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಪಿಲಿಂಗಲ್ಲು ಕೃಷ್ಣಭಟ್ ಹೇಳಿದರು. ಅವರು ಶ್ರೀ ಶಂಕರ ನಾರಾಯಣ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ಬಲೀಂದ್ರ ಹಬ್ಬವನ್ನು ಆಚರಿಸಿದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು‌.     ಆಚರಣೆಗಳು ಊರಿನ ಜನತೆಯಲ್ಲಿ ಪ್ರೀತಿ.ವಿಶ್ವಾಸ ಒಗ್ಗಟ್ಟು ತುಂಬುತ್ತದೆ. ಅಜ್ಞಾನ,ಅಂಧಕಾರ,ಅಪನಂಬಿಕೆಗಳು ಉರಿದು ಭಸ್ಮವಾಗಿ ಜ್ಞಾನಜ್ಯೋತಿಯನ್ನು ಬೆಳಗಿಸುತ್ತದೆ. ಕನ್ನಡ,ತುಳುನಾಡಿನ ಕಲೆ ಸಂಸ್ಕೃತಿಗಳನ್ನು ಮುಂದಿನ ತಲೆಮಾರಿಗೆ ದಾಟಿಸುವಂತಹ ಮಹಾತ್ಕಾರ್ಯಗಳನ್ನು ಶಾಲೆಗಳು ಮಾಡಬೇಕೆಂದು ಅವರು ಈ ಸಂದರ್ಭದಲ್ಲಿ ನುಡಿದರು.       ಕಾರ್ಯಕ್ರಮದಲ್ಲಿ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಕುಸುಮ.ಎಂ.ಪಿ.ಟಿ.ಎ. ಅಧ್ಯಕ್ಷೆ  ಶ್ರೀಮತಿ ಬೇಬಿ ಶಾಲಿನಿ ,ಅಧ್ಯಾಪಕರಾದ ಶ್ರೀ ವೆಂಕಟರಾಜ್ ವಾಶೆ,ಶ್ರೀ ವಿನೋದ್ ಕುಮಾರ್ ಚಾಲೆತ್ತಡ್ಕ,ಹಿರಿಯರಾದ ಶ್ರೀ ಸಂಕ್ರಾಂತಿ ಕೈಲಂಕಜೆ, ಶ್ರೀ ಬಟ್ಯ ಬಾಂಜತ್ತಡ್ಕ, ಶ್ರೀ ಸುಂದರ ಬಾಂಜತ್ತಡ್ಕ, ಶ್ರೀ ಪುರುಷೋತ್ತಮ ಭಟ್ ಮಿಂಚಿನಡ್ಕ. ಶ್ರೀ ಗೋವಿಂದ ಭಟ್ ಶಿಮಿಲಡ್ಕ,ಶ್ರೀ ರವಿ ಕೈಲಂಕಜೆ,ಶ್ರೀಮತಿ ಗೀತಾಮಾಲಿನಿ,ಶ್ರೀ ಶಿವಪ್ಪ ಮೂಲ್ಯ ಕೊಲ್ಲಂಪಾರೆ ಮೊದಲಾದವರು ಭಾಗವಹಿಸಿದರು. ಶಾಲೆಯಲ್ಲಿ ಸಂಜೆ ಗ್ರಾಮೀಣ ಆಟಗಳನ್ನು ಆಡಿ ರಾತ್ರಿ ಬಲೀಂದ್ರ ಸ್ಥಾಪಿಸಿ ಹೂವಿನಿಂದ ಅಲಂಕರಿಸಿ ಹಣತೆ ದೀಪಗಳಿಂದ ಶಾಲೆಯನ್ನು ಬೆಳಗಿಸಿ ಪಟಾಕಿ ಉರಿಸಿ ಮಕ್ಕಳು ಸಂಭ್ರಮಿಸಿದರು. ಅವಲಕ್ಕಿ ಪ್ರಸಾದ,ಪಾನಕ,ಸಿಹಿತಿಂಡಿಯ ವಿತರಣೆಯೂ ನಡೆಯಿತು. ಹೆತ್ತವರು,ಊರವರು,ಹಳೆ ವಿದ್ಯಾರ್ಥಿಗಳು,ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಮಕ್ಕಳು ಅಧ್ಯಾಪಕರು ಈ ಸಂದರ್ಭದಲ್ಲಿ ಪಾಲ್ಗೊಂಡರು. ಪ್ರಾರಂಭದಲ್ಲಿ ಅಧ್ಯಾಪಕರಾದ ಶ್ರೀ ರಾಜೇಶ್.ಎಸ್ ಸ್ವಾಗತಿಸಿ ಕೊನೆಯಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಐ.ಅಂಬಿಕಾ ಸರಸ್ವತಿ ಧನ್ಯವಾದವಿತ್ತರು.

No comments:

Post a Comment