Saturday 4 August 2018

ಉದಯಗಿರಿ ಶಾಲಾ ಬಯಲು ಪ್ರವಾಸ












      ಉದಯಗಿರಿ ಶಾಲಾ ಬಯಲು ಪ್ರವಾಸ

ಬದಿಯಡ್ಕ:ಕಲಿಕೆ ಎಂಬುದು ನಾಲ್ಕು ಗೋಡೆಯೊಳಗೆ ನಡೆಯುವ ಪ್ರಕ್ರಿಯೆಯಲ್ಲ. ಪ್ರತ್ಯಕ್ಷ, ಪಂಚೇಂದ್ರಿಯಗಳ ಮೂಲಕ ಕಲಿಕೆ ನಡೆದಾಗ ಆಶಯಗಳು ಗಟ್ಟಿಗೊಳ್ಳುತ್ತವೆ ಎಂಬುದು ಬಯಲು ಪ್ರವಾಸಗಳ ಮೂಲಕ ತಿಳಿಯುವ ಸತ್ಯವಾಗಿದೆ. ಭತ್ತದ ಕೃಷಿಯ ಕಷ್ಟ ನಷ್ಟಗಳನ್ನು ತಿಳಿದಾಗ ಮಾತ್ರ ಒಂದು ಕಾಳು ಅನ್ನದ ಬೆಲೆ ತಿಳಿಯುವುದೆಂದು ನಿವೃತ್ತ ಗುಮಾಸ್ತರೂ ಕೃಷಿಕರೂ ಆದ ಶ್ರೀ ಕೇಶವ ಪ್ರಭು ಕರಿಂಬಿಲ ಹೇಳಿದರು. ಅವರು ಶ್ರೀ ಶ೦ಕರನಾರಾಯಣ ಪ೦ಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯ  ಮಕ್ಕಳಿಗೆ ಭತ್ತದ ಬಯಲನ್ನು ಪರಿಚಯಿಸಿ,ಕೃಷಿಯ ಬಗ್ಗೆ ವಿವರಣೆ ನೀಡಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.ಪಂಚಾಯತು ಸದಸ್ಯರಾದ ಶ್ರೀ ವಿಶ್ವನಾಥ ಪ್ರಭು, ಸ್ಥಳೀಯರಾದ ಶ್ರೀ ದಿನೇಶ್ ಪ್ರಭು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ ಸರಸ್ವತಿ,  ಅಧ್ಯಾಪಕರಾದ ಶ್ರೀ ರಾಜೇಶ್ ಯಸ್, ಎಂ.ಪಿ.ಟಿ.ಎ  ಅಧ್ಯಕ್ಷೆ  ಶ್ರೀಮತಿ ಬೇಬಿ ಶಾಲಿನಿ, ಎಸ್.ಎಸ್.ಜಿ ಸದಸ್ಯರಾದ ಶ್ರೀಮತಿ ರಶ್ಮಿ ಎ.ಎಸ್ ಮೊದಲಾದವರು ಬಯಲು ಪ್ರವಾಸಕ್ಕೆ ಸಹಕರಿಸಿದರು.

No comments:

Post a Comment