Friday 5 October 2018

ವೈವಿಧ್ಯಮಯ ಕಲಿಕಾ ಕಾರ್ಯಕ್ರಮಗಳು



ಉದಯಗಿರಿಯಲ್ಲಿ ವೈವಿಧ್ಯಮಯ ಕಲಿಕಾ ಕಾರ್ಯಕ್ರಮಗಳು
ಶ್ರೀ ಶ೦ಕರನಾರಾಯಣ ಪ೦ಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ಎಲ್ಲಾ ಮಕ್ಕಳು ಕಲಿಕಾ ವಿಷಯದಲ್ಲಿ ತಮ್ಮ ಗರಿಷ್ಠ ಮಟ್ಟವನ್ನು ಮುಟ್ಟಲು ವಿವಿಧ ಚಟುವಟಿಕೆಗಳ ಪ್ಯಾಕೇಜನ್ನು ಇತ್ತೀಚೆಗೆ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಕುಸುಮ ಬಿಡುಗಡೆಗೊಳಿಸಿದರು. ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಬೇಬಿ ಶಾಲಿನಿ ಮಕ್ಕಳಿಗೆಲ್ಲ ವರ್ಕ್ ಬುಕ್ ಗಳನ್ನು ವಿತರಿಸಿದರು. ಇದರ ಭಾಗವಾಗಿ ಶಾಲೆಯಲ್ಲಿ ಮುಂದಿನ ದಿನಗಳಲ್ಲಿ ಬೆಳಗ್ಗೆ 9:30ರಿಂದ10ರವರೆಗೆ ಮಧ್ಯಾಹ್ನ1:30ರಿಂದ2ರವರೆಗೆ ಸಂಜೆ 3:30ರಿಂದ4:30ರವರೆಗೆ ಮತ್ತು ಶನಿವಾರಗಳಲ್ಲಿ ವಿಶೇಷ ತರಗತಿ,ತರಬೇತಿ,ಕಮ್ಮಟಗಳು ಅಧ್ಯಾಪಕರಿಂದ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಲಭಿಸುವುದು. ನಲಿ ಕಲಿ (ಭಾಷಾ ಚಟುವಟಿಕೆ), ಅಶ್ವಮೇಧ (ಗಣಿತ ಚಟುವಟಿಕೆ), ಹಸಿರು ಗಿರಿ (ತರಕಾರಿ ಕೃಷಿ), ಹಲೋ ಹಾಯ್ (ಇಂಗ್ಲೀಷ್ ಚಟುವಟಿಕೆ), ಯಕ್ಷಗಿರಿ (ಯಕ್ಷಗಾನ ತರಬೇತಿ) ಎಂಬ ಐದು ಕಾರ್ಯಕ್ರಮಗಳಿಗೆ ಇಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎಸ್.ಜಿ ಅಧ್ಯಕ್ಷ ಶ್ರೀ ಕೃಷ್ಣ ಪ್ರಸಾದ್, ಪಿ.ಟಿ.ಎ ಉಪಾಧ್ಯಕ್ಷ ಶ್ರೀ ವೇಣುಗೋಪಾಲ್, ಅಂಗನವಾಡಿ ಅಧ್ಯಾಪಿಕೆ ಶ್ರೀಮತಿ ಲೀಲ ಶಾಲಾ ಹಿತೈಷಿಗಳಾದ ಶ್ರೀ ಸುಂದರ ಬಾಂಜತ್ತಡ್ಕ, ಶ್ರೀ ವಸಂತ ಬಾಂಜತ್ತಡ್ಕ, ಶ್ರೀ ಅಬ್ದುಲ್ಲ ಮೂಕಂಪಾರೆ, ಹೆತ್ತವರು,ಊರವರು,ಹಳೆ ವಿದ್ಯಾರ್ಥಿಗಳು ಭಾಗವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ ಸರಸ್ವತಿ ಸ್ವಾಗತಿಸಿದರು.ಅಧ್ಯಾಪಕರಾದ ಶ್ರೀ ರಾಜೇಶ್ ಯಸ್, ಶ್ರೀಮತಿ ಪ್ರಿಯ.ಕೆ, ಫಾತಿಮತ್ ಶಾಹಿನ ಕಾರ್ಯಕ್ರಮದ ನೇತೃತ್ವ ವಹಿಸಿದರು.

No comments:

Post a Comment